Download Kannada Songs Lyrics Android App

Ivalu Yaaru Balleyenu - ಇವಳು ಯಾರು ಬಲ್ಲೆಯೇನು Song Lyrics
ಇವಳು ಯಾರು ಬಲ್ಲೆಯೇನು,ಇವಳು ಯಾರು ಬಲ್ಲೆಯೇನು,
ಇವಳು ಯಾರು ಬಲ್ಲೆಯೇನು,..........
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು
ಅಡಿಯೇ ಮುಟ್ಟ ನೀಳ ಜಡೆ.........,ಅಡಿಯೇ ಮುಟ್ಟ ನೀಳ ಜಡೆ,
ಮುಡಿಯ ತುಂಬಾ ಹೂವು ಜಡೆ,ಇವಳು ಅಡಿಯನಿಟ್ಟ ಕಡೆ......... ಹೆಜ್ಜೆ ಹೆಜ್ಜೆಗೆ,
ಆಹಾ ........ಓ .........ಹೋ..........,ಆಹಾ ........ಓ .........ಹೋ.........
ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು
ಅಂಗಾಲಿನ ಸಂಜೆಗೆಂಪು,ಕಾಲುನ್ದುಗೆ ಗೆಜ್ಜೆ ಇಂಪು,
ಮೋಹದ ಮಲ್ಲಿಗೆಯ ಕಂಪು,ಕರೆದು ಎನ್ನನ್ನು ಆಹಾ ....ಓ......ಓಹೋ.....
ಮೋಹದ ಮಲ್ಲಿಗೆಯ ಕಂಪು,ಕರೆದು ಎನ್ನನ್ನು ಆಹಾ ....ಓ......ಓಹೋ.....
ನಾನು ಹಿಡಿಯ ಹೋದೆನು, ನಾನು ಹಿಡಿಯ ಹೋದೆನು,
ಬಂಗಾರದ ಬೆಳಕಿನೊಳಗೆ,ಮುಂಗಾರಿನ ಮಿಂಚು ಬೆಳಗೆ,
ಇಳೆಗಿಳಿದಿಹ ಮೂಡದೊಳಗೆ,ಮೆರೆಯುತಿದ್ದಳು ,ನನ್ನ ಕರೆಯುತಿದ್ದಳು
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು