Download Kannada Songs Lyrics Android App

Idu Yaaru Bareda - ಇದು ಯಾರು ಬರೆದ Song Lyrics
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,......
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ.
ಇದು ಯಾರು ಬರೆದ ಕಥೆಯೋ,......
ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ
Tags: