• Thuthu Anna Thinnoke - ತುತ್ತು ಅನ್ನ ತಿನ್ನೋಕೆ Lyrics - Jimmi Gallu

Download Kannada Songs Lyrics Android App

Thuthu Anna Thinnoke - ತುತ್ತು ಅನ್ನ ತಿನ್ನೋಕೆ Song Lyrics

ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು,ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು,ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ.......

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ,,ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ

Tags: