• ಧೀಂತ - Dheemtha Lyrics - Katheyondu Shuruvagide

Download Kannada Songs Lyrics Android App

ಧೀಂತ - Dheemtha Song Lyrics

ಧೀಂತ ಧೀಂತ ಮನದ ಮಾತ 
ಬಿಡದೆ ಕಾಡು ನೆನಪೇ ಸ್ವಂತ 
ಭೋರ್ಗರೆವ ಮಾಯಾನದಿ ಮನ 
ಭಾವನೆಗಳ ಅಲೆಯಲಿ ದಿನ 
ಇರುವೆ ನೀನು ಹೇಗೆ 

ಮನಸೆ ಮನಸೆ ಅರೆ ಕೇಳೆ
ಕಳೆದ ನಗುವ ಬಳಿ ತಾರೆ 
ಮನಸಾರೆ... 

ಧೀಂತ ಧೀಂತ ಮನದ ಮಾತ 
ಅರಿವಾದಂತ ಕ್ಷಣವೇ ಸ್ವಂತ 
ಕನಸುಗಳ ಸಂತೇಲಿ ಸಾಗಿ ನಾ
ಹುಡಿಕಿಡಲೇ ನಿನಗೊಂದು ಜೀವನ 
ಬೊಗಸೆತುಂಬಿ ಪ್ರೀತಿ

ಮನಸೆ ಮನಸೆ ಅರೆ ಕೇಳೆ
ಕಳೆದ ನಗುವ ಬಳಿ ತಾರೆ 
ಮನಸಾರೆ... 

ಮಿತಿ ಮೀರುತಿದೆ 
ಮನದ ನಿನಾದ 
ಅತಿಯಾದರೂ ಕೂಡ 
ಏನೋ ಹಿತವಿದೆ 
ಕಲೆಹಾಕಿದ ನೆನಪು 
ನಡುದಾರಿಲಿ ತಡೆದು 
ಜೊತೆಯಾಗಿ ಕೈ ಹಿಡಿದು 
ಸಾಗೋಣ ಎಂದೆಂದಿಗೂ 

ಮನದಾಳದಿ ಹುಡುಕಾಟ ನೂರು 

ಅರಳೊ ಮರಳೊ ಮನಸೇನೆ 
ಮರಳಿ ಮರಳಿ ಬೆಳಕಾಗಿ 
ಬದುಕಾಗಿ 

ಮನಸೆ ಮನಸೆ ಅರೆ ಕೇಳೆ 
ಕಳೆದ ನಗುವ ಬಳಿ ತಾರೆ 
ಮನಸಾರೆ 

Tags: