• ಏನಮ್ಮಿ ಏನಮ್ಮಿ - Yenammi Yenammi Lyrics - Ayogya

Download Kannada Songs Lyrics Android App

ಏನಮ್ಮಿ ಏನಮ್ಮಿ - Yenammi Yenammi Song Lyrics

ಏನಮ್ಮಿ ಏನಮ್ಮಿ 
ಯಾರಮ್ಮಿ ನೀನಮ್ಮಿ 
ಆಗೋಯ್ತು ನನ್ನ ಬಾಳು 
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ 
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ 
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ 

ಹೂ ಕಣ್ಲ ಹೂ ಕಣ್ಲ 
ನಂಗು ಹಂಗೆ ಆಯ್ತು ಕಣ್ಲ 
ಪ್ರೀತಿನೇ ಹಿಂಗೆ ಕಣ್ಲ 
ಸುಮ್ನೆ ಒಂದು ಮುತ್ತು ಕೊಡ್ಲ 

ಬೆಳದಿಂಗ್ಳು ನೀನೆನಮ್ಮಿ 
ಲಾಲಿನ ಹಾಡ್ಲೇನಮ್ಮಿ 
ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ
ದ್ರಿಷ್ಟಿನ ತೆಗಿಲೇನಮ್ಮಿ
ಚನ್ನಪಟ್ನದ್ ಗೊಂಬೆಗೆ 
ಜೀವವು ಬರಲು 
ನಿನ್ನಂಗೆ ಕಾಣ್ತದೆ ನೋಡಮ್ಮಿ
ನೀ ಮುದ್ದು ಕಮ್ಮಿ 

ಚೆಲುವಾಂತ ಚೆನ್ನಿಗ ಭೂಪತಿರಾಯ 
ನೀನೇನೆ ಸೊಬಗು 
ಹೂಂ ಕಣ್ಲಾ 
ನೀ ರಾಜಾ ಕಣ್ಲಾ 

ನಮ್ ಪ್ರೀತಿ ಬೆಲ್ಲಕಮ್ಮಿ 
ನಾವಿಬ್ರು ಯಾರಿಗ್ ಕಮ್ಮಿ 
ನೀ ನಕ್ರೆ ಚಂದಾ ಕಂಡ್ಲಾ 
ಈ ಜೀವ ನಿಂದೆ ಕಂಡ್ಲಾ 

ಬೀರಪ್ಪನ್ ಗುಡಿ ಮುಂದೆ 
ಹರಕೆಯ ಕಟ್ಟಿ 
ನಿನ್ನನ್ನೇ ಬೇಡಿದೆ 
ದಿಟ ಕಂಡ್ಲಾ
ನನ್ನಾಣೆ ಕಂಡ್ಲಾ 

ಕಲ್ಲಿನ ಬಸವನು 
ಕಣ್ಣೊಡಿತಾನೆ 
ನೀನಂದ್ರೆ ಜಾತರೆ 
ಕೇಳಮ್ಮಿ, ವೈಯ್ಯಾರಮ್ಮಿ 

ಕಾಲುಂಗರ ಹಾಕ್ಲೇನಮ್ಮಿ 
ಹಣೆಬೊಟ್ಟು ಇಡ್ಲೇನಮ್ಮಿ 

ಏನಂದ್ರು ಜಾಸ್ತಿ ಕಂಡ್ಲಾ 
ನಿನ್ ಪ್ರೀತಿ ಆಸ್ತಿ ಕಂಡ್ಲಾ 

Tags: