• ನೀ ಸನಿಹಕೆ ಬಂದರೆ - Nee Sanihake Bandare Lyrics - Maleyali Jotheyali

Download Kannada Songs Lyrics Android App

ನೀ ಸನಿಹಕೆ ಬಂದರೆ - Nee Sanihake Bandare Song Lyrics

ನೀ ಸನಿಹಕೆ ಬಂದರೆ
ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ
ಏನು ಹೇಳು, ಹೇಳು ನೀನು...

ಸಮೀಪ ಬಂತು ಬಯಕೆಗಳ
ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ
ಸರಾಗವಾದ ಬರವಣಿಗೆ

ನಿನ್ನ ಬಿಟ್ಟು ಇಲ್ಲ ಜೀವ
ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ
ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ

ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು

ನನ್ನ ಎದೆಯ ಸಣ್ಣ ತೆರೆಯ
ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ
ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ
ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ
ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು

ನೀ ಸನಿಹಕೆ ಬಂದರೆ
ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ

ಏನು ಹೇಳು, ಹೇಳು ನೀನು...

Tags: