Download Kannada Songs Lyrics Android App

ಯಾವ ಕಾಲದ - Yaava Kaalada Song Lyrics
ಯಾವ ಕಾಲದ ಶಾಸ್ತ್ರವೇನು
ಹೇಳಿದರೇನು
ಎದೆಯ ದನಿಗೂ ಮಿಗಿಲು
ಶಾಸ್ತ್ರ ಇಹುದೇನು
ಎಂದೋ ಮನು ಬರೆದಿಟ್ಟು
ಇಂದೆಮಗೆ ಕಟ್ಟೇನು
ನಿನ್ನೆದೆಯ ದನಿಯೇ ರುಶಿ
ಮನು ನಿನಗೆ ನೀನು
ಯಾವ ಕಾಲದ ಶಾಸ್ತ್ರವೇನು
ಹೇಳಿದರೇನು
ಎದೆಯ ದನಿಗೂ ಮಿಗಿಲು
ಶಾಸ್ತ್ರ ಇಹುದೇನು
ನೀರಡಿಸಿ ಬಂದ ಸೋದರಗೆ
ನೀರನು ಕೊಡಲು
ಮನು ಧರ್ಮ ಶಾಸ್ತ್ರವೆನಗೊರೆಯಬೇಕೇನು
ನೊಂದವನ ಕಂಬನಿಯನೊರೆಸಿ
ಸಂತೈಸುವಳೆ
ಶಾಸ್ತ್ರ ಪ್ರಮಾಣವು ಅದಕೆ ಇರಬೇಕೇನು
ಯಾವ ಕಾಲದ ಶಾಸ್ತ್ರವೇನು
ಹೇಳಿದರೇನು
ಎದೆಯ ದನಿಗೂ ಮಿಗಿಲು
ಶಾಸ್ತ್ರ ಇಹುದೇನು
ಪಂಚಮದ ಶಿಶುವೊಂದು
ಕೆರೆಯಲಿ ಮುಳುಗಿತ್ತಿರೆ
ದಡದಲ್ಲಿ ಮೀಯುತ್ತ
ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟು
ಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರ
ಸಮ್ಮತವನೇನು?
ಯಾವ ಕಾಲದ ಶಾಸ್ತ್ರವೇನು
ಹೇಳಿದರೇನು
ಎದೆಯ ದನಿಗೂ ಮಿಗಿಲು
ಶಾಸ್ತ್ರ ಇಹುದೇನು
Tags: