Download Kannada Songs Lyrics Android App

ಏತಕೆ - Yethake Song Lyrics
ಏತಕೆ....
ಬೊಗಸೆ ತುಂಬ ಆಸೆ ನೀಡುವೆ
ಏತಕೆ...
ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲ ಹಾರಡುವೆ
ತುಸುವೆ ಕೈ ಚಾಚು ಸರಿ ಹೋಗುವೆ
ಏತಕೆ....
ಬೊಗಸೆ ತುಂಬ ಆಸೆ ನೀಡುವೆ
ಈ ನಲ್ಮೆಯ ಬಾಯಿ ಬಿಡಲು ನನಗೊಂದು ಪದ ಬೇಕಿದೆ
ಈ ನಿನ್ನಲಿ ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ...
ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ ನನ್ನಾ ಮನಸು ಬಿಚ್ಚಿಡುವೆ
ಏತಕೆ..
ಬೊಗಸೆ ತುಂಬ ಆಸೆ ನೀಡುವೆ..
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ
ನಿನ್ನೊಪಿಗೆ ಇದೆಯಾ ಹೇಳು ಕಡು ಪೋಲಿ ನಾನಾಗಲು
ನಿನ್ನಾಣೆಗು ಕಾಯುತ್ತಿರುವೆ ನ ಬೇಗ ಹಾಳಾಗಲು
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ ನೀಡು ನಿನ್ನ ಸಹಕಾರ
ಖಾಲಿ ತೋಳು ನನಗೊಂತು ಸಾಕಾಗಿದೆ ಏನು ಹೇಳು ಪರಿಹಾರ
ಏತಕೆ
ಬೊಗಸೆ ತುಂಬ ಆಸೆ ನೀಡುವೆ..
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕ್ಕೆ ಇಷ್ಟೆಲ್ಲ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ..
ಬೊಗಸೆ ತುಂಬಿ ಆಸೆ ನೀಡುವೆ..