• ಬಸಣ್ಣಿ - Basanni Lyrics - Yajamana

Download Kannada Songs Lyrics Android App

ಬಸಣ್ಣಿ - Basanni Song Lyrics

ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು 
ಗೆಜ್ಜಿ ಕಟ್ಟೀನಿ 
ಲಕ್ಸು ಸೋಪು ಹಾಕಿ ಜಳಕ ಮಾಡಿ
ಜಸ್ಟ್ ಬಂದೀನಿ 

ನಾವು ವ್ಯಾಪಕವಾಗಿ ಉಳ್ಳಾಗಡ್ಡಿ
ತಿಂದು ಕುಂತಿದ್ವಿ 
ನಿಮ್ಮ ಹೆಜ್ಜಿ ಸಪ್ಪಳ ಕೇಳಿ 
ಟಕ್ಕನೆ ಎದ್ದು ನಿಂತ್ಕಂಡ್ವಿ 
ನಿಮಗೆ ಶೇಕು ಹ್ಯಾಂಡು 
ಕೊಡಬೇಕಂತ 
ಕೈ ತೊಳಕಂಡ್ವಿ 

ಬಸಣ್ಣಿ ಬಾ 
ಬಸಣ್ಣಿ ಬಾ
ಬಜಾರು ನಮ್ದ ಇವತ್ತು 
ಬಸಣ್ಣಿ ಬಾ

ಬಸಣ್ಣಿ ಬಾ 
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ 
ಬಸಣ್ಣಿ ಬಾ

ಪಿಕ್ಸು ಮಾಡಬೇಕು à²¸à²‚ಭಂದಾನ 
ಅದಕ ಬಂದೀನಿ 
ಲಕ್ಸು ಸೋಪು ಹಾಕಿ ಜಳಕ ಮಾಡಿ 
ಜಸ್ಟ್ ಬಂದೀನಿ 

ಬೆಂಕಿ ಪೆಟ್ಟಿಗೆ ಕಡ್ಡಿ ಹಂಗ 
ಒಣಗೀವಿ ನಾವು 
ಗೀರ್ಯರ ಗೀರ 
ಸುಟ್ಟು ಹೋಕ್ಕಣಿ 

ಬರಗಾಲ್ದಾಗ ಸೀಕ್ರೆಟ್ ಆಗಿ 
ಬೆಳಸೀವಿ ಹೂವು 
ನಂಗಾರ ನೀಡ 
ದೊಡ್ಡೋಳಾಕ್ಕಣಿ 

ಸಾಕಾಗೋಗೈತಿ ಎಡವಟ್ತಿ ನೀನು 
ಸರ್ಕಾರಿ ಸಾಲಿ 
ಪ್ರಾಡಕ್ಟು ನಾನು 

ನಾವು ಪಾಟಿ ಪೆನ್ಸಿಲ್ 
ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ 
ಲಾಸ್ಟು ಬೆಂಚಿನ ಮ್ಯಾಗೆ 
ಫಸ್ಟು ಗೆಳತಿ ಹೆಸುರು ಕೆತ್ತಿದ್ವಿ 
ನೀನು ಅವತ್ತು ಸಿಗ್ಬಾರ್ದಿತ್ತ ಹುಡುಗಿ 
ಚೆನ್ನಾಗಿರ್ತಿದ್ವಿ 

ಇರ್ಲಿ ಬಾ 
ಬಸಣ್ಣಿ ಬಾ  

ಬಜಾರು ನಮ್ದ ಇವತ್ತು 
ಬಸಣ್ಣಿ ಬಾ

ಬಸಣ್ಣಿ ಬಾ 
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ 
ಬಸಣ್ಣಿ ಬಾ

ಮಿಕ್ಸು ಮಾಡಬೇಡ ಕಣ್ಣು ಕಣ್ಣು 
ಸುಟ್ಟು ಹೋಕ್ಕಣಿ 
ಲಕ್ಸು ಸೋಪು ಹಾಕಿ ಜಳಕ ಮಾಡಿ 
ಜಸ್ಟ್ ಬಂದೀನಿ 

ಇಳಕಲ್ ಸೀರಿ ಮೊಳಕಾಲ್ ಮ್ಯಾಗ 
ಯಾತಕ ಉಡಬಾಕು 
ಪ್ಯಾಸನ್ ಅಂದ್ರು ಅದಕ ಉಟ್ಟೀನಿ 
ಮಕಮಲ್ ಟೋಪಿ ನಮ್ಮ ತಲಿಮ್ಯಾಲ್
ಯಾಕ ಇಡಬ್ಯಾಕು
ಸಿಂಗಲ್ ಆಗಿ ಸಿಕ್ರ ಹೇಳ್ತನಿ

ಬುಕ್ಕು ಮಾಡೇನಿ
ನಾ ಇನ್ನೆಲ್ಲೊ ಛತ್ರ
ಸೀಮ್ಯಾಗಿಲ್ಲದ್ದು ಏನೈತಿ
ಆಕಿ ಹತ್ರ
ಆಕಿ ನಾಟಿ ಬ್ಯೂಟಿ ಸೈಡಿನಿಂದ
ಥೇಟು ಸಿರಿದೇವಿ  
ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ
ಪ್ರೀತಿ ಮಾಡೆವಿ

ನೀವು ಬಂದೀರಂತ ನಿಯತ್ತು ಸಲುಪು 
ಸೈಡೀಗೆ ಇಟ್ಟಿದ್ವಿ

ಇರ್ಲಿ ಬಾ 
ಬಸಣ್ಣಿ ಬಾ  

ಬಜಾರು ನಮ್ದ ಇವತ್ತು 
ಬಸಣ್ಣಿ ಬಾ

ಬಸಣ್ಣಿ ಬಾ 
ಬಸಣ್ಣಿ ಬಾ
ಬಸಣ್ಣಿ  à²¬à²¾ ಬಾ ಬಾ 
ಬಸಣ್ಣಿ ಬಾ

 

 

Tags: