• ಅನಿಸುತಿದೆ - Anisuthide Lyrics

Download Kannada Songs Lyrics Android App

ಅನಿಸುತಿದೆ - Anisuthide Song Lyrics

ಮೊದಲ ಸಲ ಬದುಕಿರುವೆ 
ಅನಿಸುತಿದೆ 
ಮಗ್ಗುಲಲೆ ಮರಣವಿದೆ 
ಅನಿಸುತಿದೆ

ಇರುಳಿನಲೂ ನೆರಳೂ ಸಹ 
ಬೆವರುತಿದೆ 
ಕನಸುಗಳ ಕಳೆಬರವು 
ಕಣ್ಣಲ್ಲಿದೆ 

ನೀ ಸಿಗದಿರಲೇನು ನನಗೆ 
ನೀನಿರುವ ಜಗದೊಳಗೆ 
ನಾನಿರುವೆ ಎನ್ನುವುದೆ 
ಖುಷಿ ಕೊನೆಗೆ 

ಕೋರುವ ಮುನ್ನ ನಿನಗೆ ವಿದಾಯ 
ಕೋರುವೆ ಒಂದು ಸಣ್ಣ ಸಹಾಯ 
ನೀನಿರದೆ ಬದುಕಿರಲು 
ಹೇಳು ಉಪಾಯ
ಕೊನೆವರೆಗೂ ನೆನಪಿಡೂವೆ
ಈ ರಾತ್ರಿಯ 

ಈ ಇರುಳಿಗೆ ಎನೋ ಹೆಸರು 
ಸಂತಸದ ಗರ್ಭದಲಿ 
ಸಂಕಟವ ಹೆರುತಿದೆ ಪ್ರತಿ ಉಸಿರು 
ಎದೆಯಲಿ ಇದ್ದ ಆರದ ಗಾಯ 
ಕೆಣಕಿದ ಹಾಗೆ ಮತ್ತೆ ವಿದಾಯ 
ಕೇಳುವುದು ನಾ ಈಗ ಯಾರಲಿ ನ್ಯಾಯ 
ಕೊನೆವರೆಗೂ ನೆನಪಿಡುವೆ ಈ ರಾತ್ರಿಯ 

Tags: