Download Kannada Songs Lyrics Android App

ನನ್ನ ಗೆಳೆಯ - Nanna Geleya Song Lyrics
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೆ ನೀನಯ್ಯ
ಓನಿ ಹಿಡಿದು ನಾ ಹೋಗುವಾಗ
ಶಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಂಗ
ಓನಿ ಹಿಡಿದು ನಾ ಹೋಗುವಾಗ
ಶಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಂಗ
ಮನಸಾತು ನಿನಮ್ಯಾಗ
ಕನಸಾತು ನಿನ್ನಮ್ಯಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೆ ನೀನಯ್ಯ
ನಮ್ಮೂರ ಶ್ಯಾಲ್ಯಾಗ ಕಬಡ್ಡಿ ನೀ ಆಡುವಾಗ
ಕೆರೆ ನೀರು ಕೊಡಾಕ್ ಬರ್ತಿದ್ದೆ ನಿನ್ನ ನೋಡೊ ನೆಪದಾಗ
ನಮ್ಮೂರ ಶ್ಯಾಲ್ಯಾಗ ಕಬಡ್ಡಿ ನೀ ಆಡುವಾಗ
ಕೆರೆ ನೀರು ಕೊಡಾಕ್ ಬರ್ತಿದ್ದೆ ನಿನ್ನ ನೋಡೊ ನೆಪದಾಗ
ನೀರು ಕುಡಿದು ನೀ ನಕ್ಕಾಗ
ಮಿಂಚ್ ಹೊಡ್ದಾಂಗ್ ಆತು ನನ್ನ ಮನದಾಗ
ನೀರು ಕುಡಿದು ನೀ ನಕ್ಕಾಗ
ಮಿಂಚ್ ಹೊಡ್ದಾಂಗ್ ಆತು ನನ್ನ ಮನದಾಗ
ಮನಸಾತು ನಿನಮ್ಯಾಗ
ಕನಸಾತು ನಿನ್ನಮ್ಯಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೆ ನೀನಯ್ಯ
ಬನ್ನಿ ಮುಡಿ ಹಬ್ಬದಾಗ
ಪಟಗ ಸುತ್ತಿ ನಿಂತಾಗ
ಕೊಳಲನೂದೋ ಕ್ರಿಷ್ಣ ಬೆಳ್ಳಿ ರಥದ ಮ್ಯಾಲೆ ಬಂದಂಗ
ಬನ್ನಿ ಮುಡಿ ಹಬ್ಬದಾಗ
ಪಟಗ ಸುತ್ತಿ ನಿಂತಾಗ
ಕೊಳಲನೂದೋ ಕ್ರಿಷ್ಣ ಬೆಳ್ಳಿ ರಥದ ಮ್ಯಾಲೆ ಬಂದಂಗ
ಅತ್ತಿ ಅಂದೆ ನಿಮ್ ಅವ್ವಾಗ
ಮಾವ ಅಂದೆ ನಿಮ್ ಅಪ್ಪಾಗ
ಪಕ್ಕ ಆದೆ ಮನದಾಗ
ಹೋಳ್ಗಿ ಊಟ ಯಾವಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೆ ನೀನಯ್ಯ