• ಕಾಣೆಯಾಗಿರುವೆ ನಾನು - Kaaneyagiruve Naanu Lyrics - Odeya

Download Kannada Songs Lyrics Android App

ಕಾಣೆಯಾಗಿರುವೆ ನಾನು - Kaaneyagiruve Naanu Song Lyrics

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!
ಗಾಯಕೆ ಕುಡಿನೋಟ ಸಾಕು
ಮಾಯಿಸೋ ಒಡನಾಟ ಬೇಕು
ಮಾತಾಡುವ ದೇವರೇ ನೀನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

ನಿನ್ನ ಕಿರುಬೆರಳ ತುದಿಯಲ್ಲಿ
ಕುಣಿಸು ನನ್ನ!

ಸಣ್ಣ ಪರಿಮಳವ ಉಸಿರಲಿ
ಬೆರಸು ಚಿನ್ನ!

ನೀನು ತೊಟ್ಟಿರುವ ಉಡುಪಿಗೂ
ಎಷ್ಟು ಜಂಬ!

ನೀನು ಸಿಗದಿರಲು ಅಲೆಯುವೆ
ಊರ ತುಂಬಾ!

ಪ್ರೀತಿಯ ಅವತಾರ ನೂರು

ತೋರುತ ನೀ ಸನಿಹ ಕೂರು

ಈ ಜೀವದ ಕಾಳಜಿ ನೀನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

ನಿನ್ನ ನೆನಪುಗಳೇ ಮನಸ್ಸಿಗೆ
ಪಾರಿಜಾತ!

ದಿವ್ಯ ನಸುನಗುವೆ ಕನಸಿನ
ಜಾಹಿರಾತ!

ನೀನು ಕರೆದರೆ ನಾ ಬರುವೆನು
ಹಾಗೇನಿಲ್ಲ!

ನಿನ್ನ ಜೊತೆಗಿರುವ ಕ್ಷಣಗಳೇ
ಜೋನಿಬೆಲ್ಲ!

ವಾಸಿಸು ಕನಸಲ್ಲಿ ಬಂದು

ಪ್ರೀತಿಸು ಹೃದಯಾನೆ ನಿಂದು

ಓ.. ನೀ.. ನಿಲ್ಲದೆ..
ತಬ್ಬಲಿ ನಾನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

ಕಾಣೆಯಾಗಿರುವೆ ನಾನೂ..
ಎದುರಲಿ ಕಾಣುತಿರುವಾಗ ನೀನು!

Tags: