Download Kannada Songs Lyrics Android App

ಶ್ಯಾನೆ ಲವ್ ಆಗೋಯ್ತಲ್ಲೆ - Shyaane Love Aagoythalle Song Lyrics
ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ..
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ!
ನಾನು ನಂಜಿ, ನೀನು ನನ್ನ ನಂಜ..
ಬಾರೋ ಬಾರಿಸೋಣ ಬ್ಯಾಂಡು ಬಾಜ!
ಅಂದಾನ ಆಸೇನ ಬಚ್ಚಿಡೋಕಾಗತ್ತ
ಬಚ್ಚಿಟ್ರೆ ಪರ್ಪಂಚ, ಮುಂದಕ್ಕೆ ಹೋಗತ್ತ
ಬಾರಮ್ಮಿ ಬಾರೆ ಇತ್ತ ಆ ಆ ಆ..
ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ..
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ!
ಕನಸಲ್ಲಿ ಬಂದ್ಬುಟ್ಟು, ಕಣ್ಣಲ್ಲಿ ಕಣ್ಣಿಟ್ಟು
ಕೈ ಹಿಡಿದು ಎಳದಲ್ಲೋ ನಂಜಾ!
ನಂಜ ನಂಜ ನಂಜ ಅಂತ, ಕೊಡ್ತಿಯಲ್ಲೇ ಮಾಂಜ!
ಮುಂಜಾನೆ ಮಂಜಲ್ಲಿ, ಮಾರ್ನೌಮಿ ಹಬ್ದಲ್ಲಿ
ಮುತ್ತ್ಕೊತ್ತು ಓಡೋದೆ ನಂಜಿ!
ನಂಜಿ ನಂಜಿ ನಂಜಿ ಅಂತ, ದೂರ ನಿಂತೆ ಅಂಜಿ!
ಪಲ್ಲಕ್ಕಿ ಪಲ್ಲಕ್ಕಿ, ಹೊರ್ತೀನಿ ನಾ ನಿಂಗೆ!
ಹಾಲಕ್ಕಿ ಹಾಲಕ್ಕಿ, ನುಡಿದೈತೆ ಶುಭಾವಾಗೆ!
ಬಚ್ಚಿಟ್ಟು ಮುಚ್ಚಿಟ್ಟು ಉಪಯೋಗ ಇಲ್ಲಮ್ಮಿ
ಪ್ರೀತೀನ ಬಿಚ್ಚಿಟ್ಟು ಹೇಳ್ತೀನಿ ಬಾರಮ್ಮಿ!
ಬೇಗಾನೆ ಬಾರೆ ನಂಜಿ!
ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ..
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ!
ನನ್ನಂತ ಖಡಕ್ಕು ರೊಟ್ಟಿಗೆ
ನಿನ್ನಂತ ಜವಾರಿ ಬೆಣ್ಣೆನೆ ಬೇಕು!
ಬೇಕು ಬೇಕು ಬೇಕು ಅಂತ, ಇನ್ನು ಯಾಕೆ ಬ್ರೇಕು!
ಮುದ್ದಾಡು ಮುದ್ದಾಡು, ಮೂರೊತ್ತು ಮುದ್ದಾಡು
ನಿಂದೇನೆ ಮೈಸೂರು ಪಾಕು!
ಪಾಕು ಪಾಕು ಪಾಕು ನಿನ್ನ, ಮುಟ್ಟಿದರೆ ಏನೋ ಶಾಕು!
ಅಮ್ಮಮ್ಮೋ.. ಅಮ್ಮಮ್ಮೋ..
ಏನೇನೊ ಅಯ್ತೀಗ!
ಜುಮ್ಮಮ್ಮೋ.. ಜುಮ್ಮಮ್ಮೋ..
ನಿನ್ನನ್ನು ಸೋಕಾಗ!
ನಿನ್ನಂತ ಹೈದನ್ನ ನಾನೆಲ್ಲೂ ನೋಡಿಲ್ಲ
ಇವತ್ತು ಆದಂಗೆ ಯಾವತ್ತು ಆಗಿಲ್ಲ
ನೋಡಿತ್ತ ಇನ್ನೊಂದ್ ಸಲ!
ಶ್ಯಾನೆ ಲವ್ ಆಗೋಯ್ತಲ್ಲೋ, ನಂಜ..
ಬಾರೋ ಬಾರಿಸೋಣ ಬ್ಯಾಂಡು ಬಾಜ!